ನಾಗೇಶ್ ಕೆ.ಎನ್. ಎರಡು ದಶಕದ ಹಿಂದೆ ಕನ್ನಡ ಭಾಷೆಯ ಮೊದಲ ನ್ಯೂಸ್ ಏಜೆನ್ಸಿ ಕರ್ನಾಟಕ ನ್ಯೂಸ್ ನೆಟ್ (KNN) ಸಂಸ್ಥೆಯಲ್ಲಿ ತಮ್ಮ ವೃತ್ತಿ ಆರಂಭಿಸಿದವರು. ರಾಜ್ಯಮಟ್ಟದ ಪತ್ರಿಕೆಗಳಿಗೆ ನಿರಂತರವಾಗಿ ಬರೆಯುವುದರ ಮೂಲಕ ಲೇಖನಿಯ ಮೊನಚು ಹೆಚ್ಚಿಸಿಕೊಂಡರು. ತಮ್ಮ ಒಲವಿನ ಕೃಷಿ ಕ್ಷೇತ್ರದಲ್ಲಿ ನೆಲೆ ನಿಂತರು. ದೂರದರ್ಶನದ ಕೃಷಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡರು. ಸಮಯ ಟಿ.ವಿ-“ಕೃಷಿ ಸಮಯ” ಕಾರ್ಯಕ್ರಮ ಮುಖ್ಯಸ್ಥರಾಗಿ 900 ಕ್ಕೂ ಹೆಚ್ಚು ವಿಶೇಷ ವರದಿಗಳನ್ನು ನೀಡಿದರು. ಕೃಷಿ ಸಮಯ ಪತ್ರಿಕೆ ಜವಾಬ್ಧಾರಿಯ ಜೊತೆಗೆ ಗ್ರಾಮ ಮಟ್ಟದಿಂದ ಅಂತಾರಾಷ್ಟ್ರೀಯ ಕೃಷಿ ಸಂಸ್ಥೆಗಳಿಗೆ ಹಾಗೂ ರೈತ ಚಳವಳಿಗಳಿಗೆ ಮಾಹಿತಿ ಶಿಕ್ಷಣ ಸಂವಹನ (IEC) ತಜ್ಞರಾಗಿ ಸೇವೆ ಒದಗಿಸುತ್ತಿದ್ದಾರೆ.