ಕಿರುಕುಳಕ್ಕಿಲ್ಲ ಇಲ್ಲಿ ಆಸ್ಪದ : NO VIOLENCE – ಮಹಿಳೆಯರ ಸುರಕ್ಷತೆಗೆ ಬಿಗಿ ಕಾನೂನು

ಕಿರುಕುಳಕ್ಕಿಲ್ಲ ಇಲ್ಲಿ ಆಸ್ಪದ : NO VIOLENCE – ಮಹಿಳೆಯರ ಸುರಕ್ಷತೆಗೆ ಬಿಗಿ ಕಾನೂನು
Spread the love

ನಾಗೇಶ್ ಕೆ.ಎನ್.

ಘನ ಸರ್ವೋಚ್ಛನ್ಯಾಯಾಲಯದ ನಿರ್ದೇಶನದಂತೆ ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ಇಲಾಖೆಯು ಮಹಿಳೆಯರ ಸುರಕ್ಷತೆಗಾಗಿ ಮಹತ್ವದ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. 

  • ವೈದ್ಯಕೀಯ ಕ್ಷೇತ್ರದಲ್ಲಿನ ವೃತ್ತಿಪರರ ಸುರಕ್ಷತೆ ಹಾಗೂ ಯೋಗಕ್ಷೇಮಕ್ಕಾಗಿ ಮಾರ್ಗಸೂಚಿಗಳನ್ನು ರಚಿಸಿ ಜಾರಿಗೆ ತಂದಿದೆ.
  • ಬಹಳ ನಿರ್ದಿಷ್ಟವಾಗಿ ಲಿಂಗಆಧಾರಿತ ದೌರ್ಜನ್ಯಗಳ ಬಗ್ಗೆ ನಿಗಾವಹಿಸುವುದು ಇದರ ಮುಖ್ಯ ಉದ್ದೇಶ.
  • ಅರೆಕಾಲಿಕ ನೌಕರರು, ರೆಸಿಡೆಂಟ್ ಡಾಕ್ಟರ್ ಗಳು ಹಾಗೂ ನಾನ್ ರೆಸಿಡೆಂಟ್ ಡಾಕ್ಟರ್ ಗಳು ತಮ್ಮ ಕೆಲಸದ ಸ್ಥಳಗಳಲ್ಲಿ ಘನತೆಯಿಂದ ಕೆಲಸ ಮಾಡುವ ಪರಿಸರ ನಿರ್ಮಿಸುವುದು

ನಿರ್ಭಯಾ ಕಾಯಿದೆಯ ಪ್ರಮುಖ ಅಂಶಗಳನ್ನೊಳಗೊಂಡು ಇನ್ನಷ್ಟು ಮಾರ್ಪಾಡುಗಳೊಂದಿಗೆ ಈ ಮಾರ್ಗಸೂಚಿಯನ್ನು ತಯಾರು ಮಾಡಲಾಗಿದೆ.

ಏನೆಲ್ಲಾ ಇದೆ ಈ ಮಾರ್ಗಸೂಚಿಯಲ್ಲಿ

  • ಕೆಲಸ ಮಾಡುವ ಸ್ಥಳದಲ್ಲಿ ಸುರಕ್ಷಿತ ಪರಿಸರ ನಿರ್ಮಾಣ
  • ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳ ವಿನ್ಯಾಸ ಮತ್ತು ನಿರ್ವಹಣೆ
  • ಸುರಕ್ಷಿತ ಸಾರಿಗೆ
  • ತುರ್ತು ಸಂದರ್ಭಗಳ ನಿರ್ವಹಣೆಗೆ ಮಾರ್ಗಸೂಚಿ (ಪ್ರೋಟೋಕಾಲ್ಸ್)
  • ಸಾಂಸ್ಥಿಕ ನೀತಿಗಳು ಮತ್ತು ಕಾರ್ಯವಿಧಾನಗಳು
  • ವೈಯಕ್ತಿಕ ಸುರಕ್ಷತೆಗಾಗಿ ಅಗತ್ಯ ಕ್ರಮಗಳು
  • ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ
  • ತರಬೇತಿ ಮತ್ತು ಜಾಗೃತಿ
  • ನೆರವು ಮತ್ತು ಬೆಂಬಲ ವ್ಯವಸ್ಥೆ
  • ಕಾನೂನಾತ್ಮಕ ಹಾಗೂ ನೈತಿಕ ಬೆಂಬಲ ಮತ್ತು ರಕ್ಷಣೆ

ಕೆಲಸದ ಸ್ಥಳದಲ್ಲಿ ಸುರಕ್ಷಿತ  ವಾತಾವರಣ

 ವೈದ್ಯಕೀಯ ಸೇವಾ ಸಿಬ್ಬಂದಿಗಳು ಆಸ್ಪತ್ರೆ ಹಾಗೂ ಕಾಲೇಜುಗಳ ಆವರಣಕ್ಕೆ ಪ್ರವೇಶ ಪಡೆಯಲು ಬಯೋಮೆಟ್ರಿಕ್ ಅಥವಾ ಮುಖಚಹರೆಯನ್ನು ಗುರುತುಹಚ್ಚಿ ಬಾಗಿಲು ತೆರೆದ ನಂತರ ಒಳಗೆ ಪ್ರವೇಶ ಪಡೆಯುವ ವ್ಯವಸ್ಥೆ ಅಳವಡಿಸುವುದು.

  • ಪ್ರತಿ ಆರೋಗ್ಯ ಸೇವಾ ಸಿಬ್ಬಂದಿಯೂ ನಿರ್ದಿಷ್ಟ ಯೂನಿಫಾರಂ, ನಿರ್ದಿಷ್ಟ ಬಣ್ಣದ ಟ್ಯಾಗ್ ಗಳು ಹಾಗೂ ಗುರುತಿನ ಚೀಟಿ ಧರಿಸುವುದು ಕಡ್ಡಾಯ.
  • ರೋಗಿಗಳ ಸಹಾಯಕರು ಆಸ್ಪತ್ರೆಯ ಒಳಗೆ ಪ್ರವೇಶ ಪಡೆಯುವ ಮುನ್ನ ಮತ್ತು ವೈದ್ಯರನ್ನು ಭೇಟಿ ಮಾಡುವ ಮುನ್ನ ಎರಡೂ ಕಡೆ ತಪಾಸಣೆಗೆ ಒಳಪಡಬೇಕು.

ರಕ್ಷಣಾ ಸಿಬ್ಬಂದಿ

ಪ್ರತಿ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳಲ್ಲಿ ದಿನದ ೨೪ ಗಂಟೆಗಳೂ ಕಂಟೋಲ್ ರೂಂ ನಲ್ಲಿ ಆಸ್ಪತ್ರೆಯ ಆವರಣದ ಚಲನವಲನಗಳನ್ನು ಸಿಸಿ ಟಿವಿ ಫುಟೇಜ್ ವೀಕ್ಷಿಸುತ್ತಿರಬೇಕು. ಹತ್ತಿರದ ಪೊಲೀಸ್ ಠಾಣೆಯೊಂದಿಗೂ ಸಂಪರ್ಕದಲ್ಲಿರಬೇಕು.

  • ಕಂಟ್ರೋಲ್ ರೂಂ 24×7
  • ಮಾಜಿ ಸೇನಾ ಅಧಿಕಾರಿಗಳ ತಂಡ ರಕ್ಷಣಾ ವ್ಯವಸ್ಥೆಯಲ್ಲಿರಬೇಕು
  • Control Room ನಲ್ಲಿ ಸಿಸಿಟಿವಿ ದೃಶ್ಯಾವಳಿಗಳ ನಿಗಾ ಮತ್ತು ತುರ್ತು ಸಂದೇಶಕ್ಕೆ ಅಲಾರಂ ವ್ಯವಸ್ಥೆ
  • 24 ಗಂಟೆಗಳ ಟಾಲ್ ಫ್ರೀ ಹೆಲ್ಪ್ ಲೈನ್

ಕೆಲಸದ ಸ್ಥಳಗಳಲ್ಲಿ ರಕ್ಷಣಾ ಸಿಬ್ಬಂದಿ: ರಕ್ಷಣಾ ಸಿಬ್ಬಂದಿಯನ್ನು ನೇಮಿಸುವಾಗ ಕನಿಷ್ಟ ವಿದ್ಯಾರ್ಹತೆಯುಳ್ಳ ಮತ್ತು ಪೊಲೀಸ್ ವೆರಿಫಿಕೇಷನ್ ಮಾಡಿಸಿ ಯಾವುದೇ ಅಪರಾಧ ಹಿನ್ನೆಲೆ ಇಲ್ಲದ ವ್ಯಕ್ತಿಗಳನ್ನೇ ನೇಮಿಸತಕ್ಕದ್ದು

ತುರ್ತು ಸೇವಾ ಘಟಕ ಇನ್ನಿತರೆ ಸ್ಥಳಗಳಲ್ಲಿ ಹೆಚ್ಚಿನ ಸೆಕ್ಯೂರಿಟಿಗಳನ್ನು ನೇಮಿಸುವುದು

ರಕ್ಷಣಾ ಸಿಬ್ಬಂದಿ ತರಬೇತಿ: ದೌರ್ಜನ್ಯ ಪ್ರಕರಣಗಳನ್ನು ನಿರ್ವಹಿಸುವುದು, ತುರ್ತು ಸಂದರ್ಭಗಳಲ್ಲಿ ಪ್ರತಿಕ್ರಿಯಿಸುವ ಸಾಮರ್ಥ್ಯ ಬರುವಂತೆ ನಿಯಮಿತವಾಗಿ ರಕ್ಷಣಾ ಸಿಬ್ಬಂದಿಗೆ ತರಬೇತಿ ನೀಡಬೇಕು

ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜುಗಳ ಪ್ರಮುಖ ಅಥವಾ ಆಯಕಟ್ಟಾದ ಸ್ಥಳಗಳಲ್ಲಿ ರಕ್ಷಣಾ ಸಿಬ್ಬಂದಿ ಎಲ್ಲರಿಗೂ ಎದ್ದು ಕಾಣುವಂತೆ ನಿಯೋಜಿಸಿರಬೇಕು. ಇದರಿಂದ ಮಹಿಳಾ ಸಿಬ್ಬಂದಿಗೆ ಮಾನಸಿಕ  ಸ್ಥೈರ್ಯ ಬರುತ್ತದೆ

ರೋಗಿಗಳ ಕಡೆಯವರ ಹೆಚ್ಚಿನ ಮಂದಿ ಆಸ್ಪತ್ರೆಯೊಳಗೆ ಅಡ್ಡಾಡಲು ಅವಕಾಶ ನೀಡಬಾರದು. ಒಬ್ಬರಿಗೆ ಮಾತ್ರ ಪಾಸ್ ಕೊಟ್ಟು ರೋಗಿಯ ನೆರವಿಗೆ ಅನುವು ಮಾಡಿಕೊಡಬೇಕು

ಮಾಹಿತಿ ಶಿಕ್ಷಣ ಸಂವಹನ

ವೈದ್ಯಕೀಯ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ, ಕಿರುಕುಳ ನೀಡಿದ ಅಥವಾ ದೌರ್ಜನ್ಯ ಎಸಗಿದ ಅಥವಾ ತಾರತಮ್ಯವೆಸಗಿದ ಸಂದರ್ಭಗಳಲ್ಲಿ  ಭಾರತೀಯ ನ್ಯಾಯ ಸಂಹಿತೆ (ಬಿಎನ್ ಎಸ್) ಪ್ರಕಾರ ಯಾವ್ಯಾವ ಸೆಕ್ಷನ್ ಗಳಲ್ಲಿ ಕೇಸು ದಾಖಲಿಸಬಹುದು, ಅದಕ್ಕೆ ಶಿಕ್ಷೆ ಏನು ಎಂಬ ಮಾಹಿತಿಯನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಪ್ರಕಟಿಸಬೇಕು.

ರಕ್ಷಣಾ ಸಿಬ್ಬಂದಿ ಮೌಲ್ಯಮಾಪನ (ಆಡಿಟ್)

ಪ್ರತಿ ತಿಂಗಳಿಗೊಮ್ಮೆ ಸ್ಥಳೀಯ ಪೊಲೀಸರ ಸಮಕ್ಷಮದಲ್ಲಿ ರಕ್ಷಣಾ ಸಿಬ್ಬಂದಿಯ ಕೆಲಸಗಳು ಕಾರ್ಯವೈಖರಿ ಹಾಗೂ ಸವಾಲುಗಳ ಬಗ್ಗೆ ಮೌಲ್ಯಮಾಪನ ಮಾಡುವುದು.

ಆಸ್ಪತ್ರೆ ರಕ್ಷಣಾ ಸಮಿತಿ

ಆಸ್ಪತ್ರೆ ಮುಖ್ಯಸ್ಥರು

ರೆಸಿಡೆಂಟ್ ಡಾಕ್ಟರ್/ ತುರ್ತು ಸೇವಾ ಘಟಕದ ವೈದ್ಯಾಧಿಕಾರಿ

ನರ್ಸಿಂಗ್ ಸೂಪರಿಂಟೆಂಟ್

ಸಾರ್ವಜನಿಕ ಸಂಪರ್ಕಾಧಿಕಾರಿ

ರಕ್ಷಣಾ ಸಿಬ್ಬಂದಿ ಮುಖ್ಯಸ್ಥ

ಸ್ಥಳೀಯ ಪೊಲೀಸ್ ಸ್ಟೇಷನ್ ಎಸ್ ಹೆಚ್ ಒ

ವಿದ್ಯಾರ್ಥಿಗಳ ಪ್ರತಿನಿಧಿ

ಆಸ್ಪತ್ರೆ ಆವರಣ-ವೈದ್ಯಕೀಯ ಕಾಲೇಜು ಕ್ಯಾಂಪಸ್ ವಿನ್ಯಾಸ ಮತ್ತು ನಿರ್ವಹಣೆ

ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಡ್ಯೂಟಿ ರೂಂ ಮತ್ತು ಶೌಚಾಲಯ ವ್ಯವಸ್ಥೆ

ಕಟ್ಟಡ/ಆವರಣದ ಎಲ್ಲಾ ಸ್ಥಳಗಳಲ್ಲಿ ಸಾಕಷ್ಟು ಬೆಳಕು ಇರುವಂತೆ ನೋಡಿಕೊಳ್ಳಬೇಕು

ಆಯಕಟ್ಟಾದ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸುವುದು ಕಡ್ಡಾಯ ಮತ್ತು ತುರ್ತು ಸಂದರ್ಭದಲ್ಲಿ ಅಲಾರಮ್ ನೀಡಲು ಪ್ಯಾನಿಕ್ ಬಟನ್ ಅಳವಡಿಸಬೇಕು. ಇವೆರಡೂ ಕಂಟ್ರೋಲ್ ರೂಂ ಗೆ ಸಂಪರ್ಕದಲ್ಲಿರಬೇಕು

ಆಸ್ಪತ್ರೆಯ/ ಕಾಲೇಜಿನ ಯಾವ್ಯಾವ ಸ್ಥಳದಲ್ಲಿ ಸಿಸಿಟಿವಿ ಅಳವಡಿಸಲಾಗಿದೆ ಎಂಬುದರ ಬ್ಲೂ ಪ್ರಿಂಟ್ ಇಲಾಖೆಗೆ ಸಲ್ಲಿಸಬೇಕು.

ಸುರಕ್ಷಿತ ಸಾರಿಗೆ ವ್ಯವಸ್ಥೆ

ಆಸ್ಪತ್ರೆಯ ಅಥವಾ ವೈದ್ಯಕೀಯ ಕಾಲೇಜುಗಳ ಆವರಣ ಬಹಳ ವಿಶಾಲವಾಗಿದ್ದು ವಿವಿಧ ಬ್ಲಾಕ್ ಗಳು, ಹಾಸ್ಟೆಲ್, ವಸತಿ ನಿಲಯಗಳಿಗೆ ತೆರಳಲು ಅಂತರ ಹೆಚ್ಚಿರುವ ಕಾರಣ ಮಹಿಳಾ ಸಿಬ್ಬಂದಿಯನ್ನು ಸುರಕ್ಷಿತವಾಗಿ ಅವರ ತಂಗುದಾಣಗಳಿಗೆ ತಲುಪಿಸಲು ವಾಹನ ವ್ಯವಸ್ಥೆ ಕಲ್ಪಿಸಬೇಕು. ಹೆಚ್ಚು ಮಂದಿ ಇದ್ದಲ್ಲಿ ದೊಡ್ಡ ವಾಹನಗಳು ಇಲ್ಲವೇ ವಿದ್ಯುತ್ ಚಾಲಿತ ”ಬಗ್ಗಿ’ಗಳನ್ನು ಬಳಸಬೇಕು.

ಸಂಸ್ಥೆಯ ಆವರಣದಲ್ಲಿ ದಿನದ ೨೪ ಗಂಟೆಗಳೂ ಕ್ಯಾಂಟೀನ್ ವ್ಯವಸ್ಥೆ ಕಲ್ಪಿಸಬೇಕು. ಇದರಿಂದ ಹೊರಗಿನಿಂದ ಫುಡ್ ಸಪ್ಲೈ ಮಾಡಲು ಬರುವ ಅನಾಮಿಕರನ್ನು ತಪ್ಪಿಸಬಹುದು.

ದೌರ್ಜನ್ಯ ತಡೆ ಸಮಿತಿ

ರಾತ್ರಿ 10 ಗಂಟೆಯಿಂದ ಬೆಳಿಗ್ಗೆ ೬ ಗಂಟೆಯವರೆಗೆ ದೌರ್ಜನ್ಯ ತಡೆ ಸಮಿತಿ ಗಸ್ತು ತಿರುಗುತ್ತಿರಬೇಕು. ಈ ಸಮಿತಿಯಲ್ಲಿ ರಕ್ಷಣಾ ಸಿಬ್ಬಂದಿ, ವಿದ್ಯಾರ್ಥಿ ಪ್ರತಿನಿಧಿ, ಪೊಲೀಸ್ ಒಳಗೊಂಡಿರುತ್ತಾರೆ.

ತುರ್ತು ನಿರ್ವಹಣೆ ವಿಶೇಷ ಮಾರ್ಗಸೂಚಿ (ಪ್ರೋಟೋಕಾಲ್)

ಅಪಾಯಕಾರಿ ಸಂದರ್ಭಗಳನ್ನು ಎದುರಿಸಲು ಮತ್ತು ಚಾಕಚಕ್ಯತೆಯಿಂದ ನಿಭಾಯಿಸಲು ರಕ್ಷಣಾ ಪಡೆಗಳಿಗೆ ತರಬೇತಿ ನೀಡುವುದು.

ದಿನದ 24 ಗಂಟೆಗಳ ಕಾಲವೂ ಹೆಲ್ಪ್ ಲೈನ್ ವ್ಯವಸ್ಥೆ ಇರಬೇಕು.

ಸಾಂಸ್ಥಿಕ ನೀತಿಗಳು ಮತ್ತು ನಿರ್ದಿಷ್ಟ ಕ್ರಮಗಳು

ಕಿಂಚಿತ್ತೂ ಸಹಿಷ್ಣುತೆ ಇಲ್ಲದ ಜೀರೋ ಟಾಲರೆನ್ಸ್ ಪಾಲಿಸಿ

ದೂರು

ದೂರು ನೀಡಿದ ವ್ಯಕ್ತಿಯ ಅಥವಾ ದೌರ್ಜನ್ಯ ಹಾಗೂ ತಾರತಮ್ಯಕ್ಕೊಳಗಾದ ಮಹಿಳೆಯು ತನ್ನ ದೂರನ್ನು ಪಿಂಕ್ ಬಾಕ್ಸ್ ನಲ್ಲಿ ಹಾಕಿದ್ದಲ್ಲಿ ಅಂಥವರ ಗುರುತನ್ನು ಗೌಪ್ಯವಾಗಿಡಬೇಕು. ವಿಶೇಷವಾಗಿ ಪಿಂಕ್ ಬಾಕ್ಸ್ ಗಳನ್ನು ಶೌಚಾಲಯ, ಡ್ಯೂಟಿ ರೂಂ, ಮತ್ತು ಕೆಲವು ನಿರ್ದಿಷ್ಟ ಏರಿಯಾಗಳಲ್ಲಿ ಅಳವಡಿಸಿರಬೇಕು.

ಪಿಂಕ್ ಬಾಕ್ಸ್ ಗಳು ಎಲ್ಲರಿಗೂ ಕಾಣುವಂತೆ ಆಯಕಟ್ಟಾದ ಜಾಗದಲ್ಲಿರಬೇಕು

ಈ ಬಾಕ್ಸ್ ಗಳಲ್ಲಿ ಹಾಕಿದ ದೂರು ಎಲ್ಲರಿಗೂ ಸಿಗದಂತೆ ಡೆಸಿಗ್ನೇಟೆಡ್ ವ್ಯಕ್ತಿಗಳಿಗೆ, ಸೆನ್ಸಿಬಲ್ ಆಗಿರುವವರಿಗೆ ಮಾತ್ರ ಸಿಗುವಂತಿರಬೇಕು.

ಜಾಗೃತಿ ಮತ್ತು ಶಿಕ್ಷಣ: ಈ ಪಿಂಕ್ ಬಾಕ್ಸ್ ಬಗ್ಗೆ ಸಿಬ್ಬಂದಿಗೆ ಆಗಾಗ ಹೇಳುತ್ತಲಿರಬೇಕು.

ಆಂತರಿಕ ದೂರು ಸಮಿತಿ

ಆಸ್ಪತ್ರೆ ಆಡಳಿತದ ಮುಖ್ಯಸ್ಥರು, ಹಿರಿಯ ಸಿಬ್ಬಂದಿ ಮತ್ತು ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್

ಈ ಸಮಿತಿಯು ಪಿಂಕ್ ಬಾಕ್ಸ್ ನಲ್ಲಿ ಬಂದಿರುವ ದೂರುಗಳನ್ನು ನಿಯಮಿತವಾಗಿ ಪರಿಶೀಲಿಸಿ ಮುಂದಿನ ಕ್ರಮಕ್ಕಾಗಿ ಶಿಫಾರಸ್ಸು ಮಾಡಬೇಕು.

ನಿರಂತರ ತರಬೇತಿ ಆಪ್ತಸಮಾಲೋಚನೆ ಏರ್ಪಡಿಸಬೇಕು

ವೈಯಕ್ತಿಕ ಸುರಕ್ಷತಾ ಕ್ರಮಗಳು

ನಿರ್ದಿಷ್ಟ ಬಣ್ಣ ಆಧಾರಿತ ಗುರುತಿನ ಚೀಟಿ ನೀಡುವುದು

ವೈಯಕ್ತಿಕ ಸುರಕ್ಷತೆಗೆ ಅಲಾರಮ್ ವ್ಯವಸ್ಥೆ

ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ

ಮಹಿಳೆಯರ ಸುರಕ್ಷತಾ ನೀತಿ ನಿಯಮಗಳು ಪರಿಣಾಮಕಾರಿಯಾಗಿ ಇವೆಯೇ ? ಇಲ್ಲವೇ ? ಲೋಪಗಳೇನು ಇತ್ಯಾದಿ ವಿಷಯಗಳ ಬಗ್ಗೆ ಚರ್ಚಿಸಲು ಆಸ್ಪತ್ರೆ ಸುರಕ್ಷಾ ಸಮಿತಿ ಹಾಗೂ ಆಂತರಿಕ ದೂರು ಸಮಿತಿ ಪ್ರತಿ ತಿಂಗಳು ಸಭೆ ಸೇರಿ ಚರ್ಚಿಸತಕ್ಕದ್ದು.

ತರಬೇತಿ ಮತ್ತು ಜಾಗೃತಿ

ಲಿಂಗಸೂಕ್ಷ್ಮತೆಯ ಕುರಿತಾದ ನಿಯಮಿತ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು

ದೌರ್ಜನ್ಯ ಕಿರುಕುಳದ ವಿರುದ್ಧ ಹಾಗೂ ದೌರ್ಜನ್ಯವನ್ನು ನೋಡಿದ ವ್ಯಕ್ತಿ ಅದನ್ನು ಖಂಡಿಸುವಂತಃ ವಾತಾವರಣ ನಿರ್ಮಿಸಲು ಬೇಕಾದ ತರಬೇತಿ

ಕೌಶಲ್ಯ ಅಭಿವೃದ್ಧಿ: ಸ್ವಯಂರಕ್ಷಣೆಗೆ ಬೇಕಾದ ಕೌಶಲಗಳನ್ನು ಅಭಿವೃದ್ಧಿಪಡಿಸಲು ಬೇಕಾದ ತರಬೇತಿಗಳನ್ನು ಏರ್ಪಾಡು ಮಾಡಬೇಕು.

ಕಾರ್ಯಾಗಾರಗಳು ಮತ್ತು ಚರ್ಚಾಗೋಷ್ಟಿಗಳು: ವೈಯಕ್ತಿಕ ಸುರಕ್ಷತೆ, ಸಂಘರ್ಷ ನಿರ್ವಹಣೆ ಇನ್ನಿತರೆ ವಿಷಯಗಳ ಬಗ್ಗೆ  ಮನೋವಿಜ್ಞಾನ ವಿಭಾಗದಿಂದ ಆಗಾಗ್ಗೆ ತರಬೇತಿ ಏರ್ಪಡಿಸಬೇಕು.

ಬೆಂಬಲ ವ್ಯವಸ್ಥೆ

ಮೆಂಟರ್ಶಿಪ್ ಪ್ರೋಗ್ರಾಮ್ಸ್: ಅನುಭವಿ ಮಹಿಳಾ ವೈದ್ಯರಿಂದ ಕಿರಿಯರಿಗೆ ತಾತ್ಕಾಲಿಕ ನೌಕರರಿಗೆ ನೆರವು ಹಾಗೂ ಮಾಹಿತಿ ನೀಡಬಲ್ಲ ಕಾರ್ಯಕ್ರಮಗಳನ್ನು ಆಯೋಜಿಸಬೇಕು.

ಆಪ್ತಸಮಾಲೋಚನಾ ಸೇವೆಗಳು: ಮಾನಸಿಕ ಘಾಸಿ ಮತ್ತು ಆಘಾತಕ್ಕೊಳಗಾದ ಮಹಿಳಾ ಸಿಬ್ಬಂದಿಗೆ ಮನೋಶಾಸ್ತ್ರ ವಿಭಾಗದಿಂದ ಆಪ್ತಸಮಾಲೋಚನೆಯನ್ನು ಒದಗಿಸತಕ್ಕದ್ದು.

ಕಾನೂನಾತ್ಮಕ ಹಾಗೂ ನೈತಿಕ ರಕ್ಷಣೆ

ಯಾರಿಗಾದರೂ ಬೆದರಿಕೆ ಇದ್ದಲ್ಲಿ ಕಾನೂನಾತ್ಮಕ ಹಾಗೂ ನೈತಿಕ ರಕ್ಷಣೆಯನ್ನು ಒದಗಿಸಬೇಕು.


Spread the love