ಎಸ್ಸೆನ್ ಮನೆ ಅಭಿವೃದ್ಧಿಪಡಿಸಲು ಸರ್ಕಾರದ ನಿರ್ಲಕ್ಷ – ಮನೆ ಮಾರಲು ಹೊರಟ ಕುಟುಂಬಸ್ಥರು.

ಎಸ್ಸೆನ್ ಮನೆ ಅಭಿವೃದ್ಧಿಪಡಿಸಲು ಸರ್ಕಾರದ ನಿರ್ಲಕ್ಷ – ಮನೆ ಮಾರಲು ಹೊರಟ ಕುಟುಂಬಸ್ಥರು.
Spread the love

ನಾಗೇಶ್ ಕೆ.ಎನ್.

ಇಂದಿಗೆ 25 ವರ್ಷಗಳ ಹಿಂದೆ ಅಕ್ಟೋಬರ್ ಎರಡರಂದು ರಾಷ್ಟ್ರಪಿತ ಮಹಾತ್ಮ ಗಾಂಧಿಜಿಯವರ 131 ನೇ ಜನ್ಮದಿನದಂದು ನಡೆದ ಭಾವಪೂರ್ಣ ಸಮಾರಂಭದಲ್ಲಿ ಹಿರಿಯ ಗಾಂಧಿವಾದಿ ಮುತ್ಸದ್ದಿ, ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರಿಗೆ ನಾಡಿನ ಅತ್ಯುನ್ನತ ನಾಗರೀಕ ಪ್ರಶಸ್ತಿ “ಕರ್ನಾಟಕ ರತ್ನ” ಪ್ರಧಾನ ಮಾಡಿ ಗೌರವಿಸಲಾಯಿತು.

ಅಂದು ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದ ಎಂ.ಪಿ.ಪ್ರಕಾಶ್ “ ಇದು ಬದುಕಿನ ಅತ್ಯಂತ ಅಪರೂಪದ ಸಮಯ, ಭಾರತದ ಅಂತಃಸಾಕ್ಷಿಯ ಪ್ರತೀಕ, ಧೀಮಂತ ಚೇತನ ಎಸ್ಸೆನ್ ಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಡುವುದು ಹೆಗ್ಗಳಿಕೆಯಲ್ಲ. ಆದರೆ, ಅವರು ಅದನ್ನು ಸ್ವೀಕರಿಸಲು ಒಪ್ಪಿರುವುದು ನಮ್ಮೆಲ್ಲರ ಮತ್ತು ಈ ನಾಡಿನ ಸೌಭಾಗ್ಯ’ ಎಂದು ಭಾವಪರವಶರಾಗಿ ಹೇಳಿದ್ದರು. (ಈ ಸುದ್ಧಿ ಅಂದು ಪ್ರಜಾವಾಣಿಯಲ್ಲಿ ಪ್ರಕಟವಾಗಿತ್ತು)

ಆದರೆ ಇಂದು ಸರಿಯಾಗಿ ಇಪ್ಪತ್ತೈದು ವರ್ಷಗಳ ನಂತರ ಅದೇ ನಿಜಲಿಂಗಪ್ಪನವರು ವಾಸವಿದ್ದ ಮನೆ ಮಾರಾಟಕ್ಕಿದೆ ಎಂಬ ಸುದ್ಧಿ ಡೆಕನ್ ಹೆರಾಲ್ಡ್ ಹೆಡ್ ಲೈನ್ ಆಗಿ ಪ್ರಕಟಗೊಂಡಿದೆ.

ವ್ಯಕ್ತಿ ಎಷ್ಟೇ ಎತ್ತರದವರಾಗಿರಬಹುದು, ಗಣ್ಯರು, ಪೂಜ್ಯರೆನಿಸಿಕೊಂಡಿರಬಹುದು ಸರ್ಕಾರಗಳ – ಅಧಿಕಾರಿಗಳ ರೆಡ್ ಟೇಪಿಸಮ್ ಮುಂದೆ ಅದೆಲ್ಲವೂ ನಗಣ್ಯ ಎಂಬುದು ಮತ್ತೆ ಮತ್ತೆ ಸಾಭೀತಾಗುತ್ತಲೇ ಇರುತ್ತದೆ. ನಿನ್ನೆ ಯಾರದ್ದೋ ಇಂದು ಎಸ್ಸೆನ್ ಅಂಥಃ ಧೀಮಂತ ರಾಜಕಾರಣಿಯ ವಿಷಯದಲ್ಲೂ ಅದೇ ಆಗಿದೆ.


Spread the love