ನಾಗೇಶ್ ಕೆ.ಎನ್.
ಕರ್ನಾಟಕ ರಾಜ್ಯ ಕಳೆದ ವರ್ಷ ರಚಿಸಿದ್ದ ನಕ್ಸಲ್ ಶರಣಾಗತಿ ಹಾಗೂ ಪುನರ್ವಸತಿ ಸಮಿತಿಯು ಕೇವಲ ಒಂದೇ ವರ್ಷದಲ್ಲಿ ಚಿಕ್ಕಮಗಳೂರಿನ ಕಾಡಿನಲ್ಲಿದ್ದ ಶಸ್ತ್ರಸಜ್ಜಿತ ನಕ್ಸಲರನ್ನು ಮುಖ್ಯವಾಹಿನಿಗೆ ಕರೆತಂದಕ್ಕೆ ಸಮಿತಿಯ ಡಾ.ಬಂಜಗೆರೆ ಜಯಪ್ರಕಾಶ್, ಪಾರ್ವತೀಶ ಬಿಳಿದಾಳೆ ಮತ್ತು ಕೆ.ಪಿ. ಶ್ರೀಪಾಲ್ ಅವರಿಗೆ ಗೌರವಾಭಿನಂದನೆಗಳು. ಇವರಿಗೆ ಸಹಕರಿಸಿದ ಹತ್ತು ಹಲವು ಮಂದಿಗೂ ಶರಣು.
ಕಳೆದ ಎರಡು ದಶಕಗಳಿಂದ ಭೂಗತ ಸಶಸ್ತ್ರ ಹೋರಾಟ ನಡೆಸುತ್ತಿದ್ದ ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನ ಆರು ಮಂದಿ ಶರಣಾಗಿದ್ದಾರೆ. ಚಿಕ್ಕಮಗಳೂರಿನ ಲತಾ ಮುಂಡಗಾರು, ದಕ್ಷಿಣ ಕನ್ನಡ ಜಿಲ್ಲೆಯ ಸುಂದರಿ ಕುತ್ಲೂರು, ಚಿಕ್ಕಮಗಳೂರು ಜಿಲ್ಲೆಯ ವನಜಾಕ್ಷಿ ಬಾಳೆಹೊಳೆ, ರಾಯಚೂರು ಜಿಲ್ಲೆಯ ಮಾರೆಪ್ಪ ಅರೋಲಿ, ಕೇರಳದ ವೈನಾಡಿನ ಜಿಶಾ, ತಮಿಳುನಾಡಿನ ಕೆ.ವಸಂತ್ ವೆಲ್ಲೂರು ಶರಣಾದವರು.
ನಕ್ಷಲರ ಶರಣಾಗತಿಗೆ ನೆರವಾದ ಅಂಶಗಳು
- ಕರ್ನಾಟಕ ಸರ್ಕಾರದ ದೂರದೃಷ್ಟಿ ಮತ್ತು ಸಾಮಾಜಿಕ ಕಾಳಜಿ
- ರಾಜ್ಯ ಸರ್ಕಾರದ ಹೊಸ ಶರಣಾಗತಿ ನೀತಿಗಳು , ಪ್ಯಾಕೇಜ್ ಇತ್ಯಾದಿ
- ಶರಣಾಗತಿ ನೀತಿಗೆ ರೂಪಕೊಟ್ಟ ಆಗಿನ ಎಡಿಜಿಪಿ ಶರತ್ಚ್ಛಂದ್ರ
- ರಾಜ್ಯ ಗೃಹ ಇಲಾಖೆಯ ಉನ್ನತ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರ ಸಕಾಲಿಕ ಮಾರ್ಗದರ್ಶನ ಬೆಂಬಲ
- ನಕ್ಸಲ್ ಕಾರ್ಯಾಚರಣೇ ಹಾಗೂ ಗೂಡಚರ್ಯೆ ವಿಭಾಗದ ಮುಖ್ಯಸ್ಥರಾದ ಹರಿರಾಮ್ ಶಂಕರ್ ಅವರ ಕಾರ್ಯತಂತ್ರ
- ಸರ್ಕಾರದ ಹೊಸ ಶರಣಾಗತಿ ನೀತಿ ಘೋಷಣೆ ಹಾಗೂ ಸಮಿತಿ ರಚನೆಯಲ್ಲಿ ಪ್ರಮುಖರಾಗಿದ್ದ ವೆಂಕಟೇಶ್ ಪ್ರಸನ್ನ ಅವರ ನಿಖರ ಮಾರ್ಗದರ್ಶನ
ಇಷ್ಟರ ಜೊತೆಗೆ ಇಡೀ ಪ್ರಕ್ರಿಯೆಗೆ ನೆರವು ನೀಡಿದವರು
ಸ್ವಾಮಿ ಆನಂದ್ ಮೈಸೂರು, ಅಲಿ ಮೈಸೂರು, ಅಂಬಣ್ಣ ಅರೋಲಿಕರ್ ರಾಯಚೂರು, ಆಶಾ ಬೆಂಗಳೂರು, ನೂರ್ ಶ್ರೀಧರ್ ಬೆಂಗಳೂರು, ವಿ.ಎಸ್. ಶ್ರೀಧರ್ ಶಾಂತಿಗಾಗಿ ನಾಗರೀಕರ ವೇದಿಕೆ ಬೆಂಗಳೂರು, ಸುರೇಶ್ ಬಿಳಿಗೇರಿ ಪತ್ರಕರ್ತರ್, ಮಡಿಕೇರಿ, ಶಿವು ಬೆಂಗಳೂರು (ನಕ್ಸಲ್ ಬಂಧಿ ಕನ್ಯಾಕುಮಾರಿಯವರ ಪತಿ), ಯಶೋಧ ಕಳಸ, ಮುಜೇಕಾನ್ ಚಿಕ್ಕಮಗಳೂರು ಜಿಲ್ಲೆ, ಉಮೇಶ್ ಬಾಳೆಹೊಳೆ ಚಿಕ್ಕಮಗಳೂರು ಜಿಲ್ಲೆ (ಶರಣಾದ ನಕ್ಸಲ್ ವನಜಾಕ್ಷಿಯವರ ಸೋದರ), ಹಿಮಕರ ಸುಳ್ಯ, ಹಾಗಲಗಂಚಿ ವೆಂಕಟೇಶ್, ಶಿವಲಿಂಗಮ್ಕ ಕರ್ನಾಟಕ ದಲಿತ ಶಕ್ತಿ ಹಾವೇರಿ, ನೀಲಗುಳಿ ಪದ್ಮನಾಭ ಕೊಪ್ಪ, ನಂದಕುಮಾರ್ ಕೊಪ್ಪ, ಮೋಹನ್ ಕುಮಾರ್ ಶಾಂತಿಗಾಗಿ ನಾಗರೀಕ ಸಮಿತಿ ಬೆಂಗಳೂರು, ಕುತ್ಲೂರು ಸುರೇಶ್ ಬೆಳ್ತಂಗಡಿ, ಸುಧಾ ಮೇಗದ್ದೆ, ಹೆಬ್ರಿ ಉಡುಪಿ ಜಿಲ?ಲೆ, ಪ್ರವೀಣ್ ಮೇಗದ್ದೆ, ಹೆಬ್ರಿ ಉಡುಪಿ ಜಿಲ್ಲೆ. ಮತ್ತು ಹೆಸರು ಬಹಿರಂಗಪಡಿಸಿಕೊಳ್ಳಲು ಇಚ್ಛೆಯಿಲ್ಲದ ಇನ್ನೂ ಅನೇಕರು.
**
ಶರಣಾದ ನಕ್ಸಲರ ಬೇಡಿಕೆಗಳನ್ನು ಅವರ ಕೈಬರಹದಲ್ಲೇ ಓದಿಕೊಳ್ಳಿ…
ಶರಣಾಗತಿ ಪ್ರಕ್ರಿಯೆ ನಡೆದದ್ದು ೪೮ ಗಂಟೆಗಳಲ್ಲಿ
ಇದರ ಸೂತ್ರದಾರ ಹೇಮಂತ್ ನಿಂಬಾಳ್ಕರ್. ನಕ್ಷಲರ ಶರಣಾಗತಿ ಪ್ರಕ್ರಿಯೆ ಚಿಕ್ಕಮಗಳೂರಿನಲ್ಲಿ ನಡೆಯಬೇಕೆಂದು ಮೊದಲು ನಿರ್ಧರಿಸಲಾಗಿತ್ತಾದರೂ ನೇರ ಬೆಂಗಳೂರಿಗೆ ಕರೆತಂದು ಖುದ್ದು ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ನಡೆಯುತ್ತದೆ ಎಂಬ ವಿಷಯ ಪ್ರಾಯಶಃ ಚಿಕ್ಕಮಗಳೂರಿನಲ್ಲಿ ನೆರೆದಿದ್ದ ಮಾಜಿ ನಕ್ಷಲರಿಗಾಗಲಿ, ಖುದ್ದು ಪೊಲೀಸ್ ಅಧಿಕಾರಿಗಳಿಗಾಗಲಿ, ಜಿಲಾಡಳಿತಕ್ಕಾಗಲಿ ಮೊದಲೇ ತಿಳಿದಿರಲಿಲ್ಲ. ಆರು ಮಂದಿ ನಕ್ಷಲರನ್ನು ಸರ್ಕಾರಿ ಕಾರುಗಳಲ್ಲಿ (ಸಮಿತಿಯ ಸದಸ್ಯರೊಂದಿಗೆ) ಕುಳ್ಳಿರಿಸಿದ ಬಳಿಕೆ ಹೊರಟ ಸಾಲು ಸಾಲು ಕಾರುಗಳ ಕಾನ್ವಾಯ್ ಇದ್ದಕ್ಕಿಂದ್ದಂತೆ ನಿಂತಾಗ ಕ್ಷಣಕಾಲ ದಿಗ್ಭ್ರಮೆಗೊಂಡ ಮಾಜಿ ನಕ್ಷಲರು ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದ ಪ್ರಸಂಗವೂ ನಡೆದಿದೆ. ಇದಾವುದಕ್ಕೂ ವಿಚಲಿತರಾಗದ ನಕ್ಸಲ್ ಶರಣಾಗತಿ ಸಮಿತಿ ಹಾಗೂ ಪೊಲೀಸರ ತಂಡ ಆರೂ ಮಂದಿಯನ್ನು ಬೆಂಗಳೂರಿಗೆ ಕರೆತರುವಲ್ಲಿ ಯಶಸ್ವಿಯಾಗಿದೆ. ನಿಂಬಾಳ್ಕರ್ ಇಂಟಲಿಜೆನ್ಸ್ ಗೆದ್ದಿದೆ.
ಶರಣಾಗತಿ ಪ್ರಕ್ರಿಯೆಯನ್ನು ನೋಡುವ ಕ್ರಮ: ಡಾ ಬಂಜಗೆರೆ ಅವರ ಮಾತುಗಳು.
ಶರಣಾದ ನಕ್ಸಲರಿಗೆ ಸಂವಿಧಾನ ಮತ್ತು ಹೂವು ಕೊಟ್ಟು ಸ್ವಾಗತಿಸಿದ ಸಿ.ಎಂ.
ಕನ್ನಡ ಓದುವವರಿಗೆ ಕನ್ನಡದ ಸಂವಿಧಾನ. ಕನ್ನಡ ಓದಲು ಬರದವರಿಗೆ ಇಂಗ್ಲೀಷ್ ಭಾಷೆಯ ಸಂವಿಧಾನ ಮತ್ತು ಹೂವು ಕೊಟ್ಟು ಅವರ ಬೇಡಿಕೆಗಳನ್ನು ಪರಿಶೀಲಿಸುವುದಾಗಿಯೂ ಹೇಳಿದ ಸಿ.ಎಂ. ಯಾವುದೇ ಗಡಿಬಿಡಿಯಿಲ್ಲದೆ ನಿರುಮ್ಮಳವಾಗಿಯೇ ಇದ್ದು ನಕ್ಸಲರಿಗೆ ಮಾತನಾಡಲು ಹೇಳಿದ್ದು ವಿಶೇಷ. ಲತಾ ಮುಂಡಗಾರು ತಮ್ಮ ಎಂದಿನ ಶೈಲಿಯಲ್ಲಿ ಕಾಂಡಂಚಿನ ಜನಗಳ ಸಮಸ್ಯೆಗಳೂ ಸೇರಿದಂತೆ ಅವರು ಕೋರಿರುವ ಎಲ್ಲಾ ಬೇಡಿಕೆಗಳನ್ನೂ ಈಡೇರಿಸಬೇಕಾಗಿ ಆಗ್ರಹಪೂರ್ವಕವಾಗಿ ಹೇಳಿದ್ದಾರೆ ಅಂತೆಯೇ ವಿಕ್ರಂ ಗೌಡ್ಲು ಹತ್ಯ ತನಿಖೆ ಆಗಬೇಕೆಂಬ ಒತ್ತಾಯವನ್ನು ರಾಜ್ಯ ಸರ್ಕಾರದ ಮುಂದೆ ಮಂಡಿಸಿದ್ದಾರೆ.
ಶರಣಾಗತಿ ಸಮಿತಿಗೆ ಬಹುಮಾನ ಏಕಿಲ್ಲ ?
ಸಶಸ್ತ್ರ ಹೋರಾಟಗಾರರೊಂದಿಗೆ ಸಂಪರ್ಕ ಸಾಧಿಸಿ, ಜೀವದ ಹಂಗು ತೊರೆದು ಒಂದು ವರ್ಷ ಕಾಲ ಕಾಡು ಗುಡ್ಡಗಳಲ್ಲಿ ಅಲೆದು ಬಂದು ಇಡೀ ಶರಣಾಗತಿ ಪ್ರಕ್ರಿಯೆಯನ್ನು ಸುಸೂತ್ರವಾಗಿ ನೆರವೇರಿಸಿದ ಸಮಿತಿಯ ಡಾ ಬಂಜಗೆರೆ ಜಯಪ್ರಕಾಶ್, ಪಾರ್ವತೀಶ ಬಿಳಿದಾಳೆ ಹಾಗೂ ಶ್ರೀಪಾಲ್ ಅವರಿಗೆ ಸರ್ಕಾರ ದೊಡ್ಡ ಮೊತ್ತದ ಬಹುಮಾನ ನೀಡಬೇಕು. ಅಂತೆಯೇ ಈ ಪ್ರಕ್ರಿಯೆಯಲ್ಲಿ ಸಹಕರಿಸಿದ ಪ್ರತಿಯೊಬ್ಬರಿಗೂ ಸರ್ಕಾರದ ರಿವಾರ್ಡ್ ಬಹುಮುಖ್ಯ ಎಂಬುದು ಎಲ್ಲರ ಒತ್ತಾಯವಾಗಿದೆ.