ಕೆ. ಎನ್. ನಾಗೇಶ್
ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಭಾರತದ ಮತದಾರರು ಭಾರತೀಯ ಜನತಾ ಪಕ್ಷಕ್ಕೆ ಬಹುಮತ ನೀಡಲಿಲ್ಲ. ಆದರೂ ಎನ್ ಡಿ ಎ ಒಕ್ಕೂಟದ ಪರ ಮತದಾರನ ತೀರ್ಪು ಸ್ಪಷ್ಟವಾಗಿದೆ. ಇಂಡಿಯಾ ಒಕ್ಕೂಟಕ್ಕೆ ಸಮಾಧಾನಕರ ಬಹುಮಾನ ಸಿಕ್ಕಿದೆ. ಇರಲಿ.
ಕಳೆದ ಹತ್ತು ವರ್ಷಗಳಿಂದ ದೇಶದ ಮುಖ್ಯವಾಹಿನಿಯ ಮಾಧ್ಯಮಗಳನ್ನು ತಮ್ಮ ಪರ ದುಡಿಸಿಕೊಂಡು, ಸಾಮಾಜಿಕ ಜಾಲತಾಣಗಳ ಮುಖೇನ ವಿಶೇಷವಾಗಿ ವಾಟ್ಸಪ್ ಯೂನಿರ್ವಸಿಟಿಗಳಲ್ಲೂ ಭಾಜಪ ಪರ ನರೇಟೀವ್ಸ್ ಹರಿಬಿಟ್ಟರೂ ಪ್ರಜ್ಞಾವಂತ ಮತದಾರ ಈ ಬಾರಿ ಭಾರತೀಯ ಜನತಾ ಪಕ್ಷವನ್ನು ಪೂರ್ಣವಾಗಿ ಬೆಂಬಲಿಸಿಲ್ಲ.
ಮುಖ್ಯವಾಹಿನಿಯ ಮಾಧ್ಯಮಗಳು ತಮ್ಮ ಪರ ಇಲ್ಲದಿದ್ದರೂ ಸಾಮಾಜಿಕ ಜಾಲತಾಣದ ಕೆಲವೇ ಪ್ರೋಗ್ರೆಸೀವ್ ಮನಸ್ಸುಗಳ ಕೆಲಸ ಇಂಡಿಯಾ ಒಕ್ಕೂಟದ ಪ್ರಸ್ತುತ ಸಾಧನೆಗೆ ನೆರವಾಯಿತು. ಬಹುತ್ವದಲ್ಲಿ ನಂಬಿಕೆ ಇರಿಸಿಕೊಂಡಿರುವ ಮನಸ್ಸುಗಳಿಗೆ ಸಂದ ಜಯವಿದು. ಕಾಂಗ್ರೆಸ್ ಇನ್ನಿತರೆ ಇಂಡಿಯಾ ಒಕ್ಕೂಟದ ಪಕ್ಷಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಚುನಾವಣಾ ಸ್ಟ್ರಾಟಜಿಗಳನ್ನು ಮಾಡಬೇಕಿದೆ.
ಕರ್ನಾಟಕದಲ್ಲಿ ಭಾಜಪ ಜೆಡಿಎಸ್ ಮೈತ್ರಿ ಆಗಿದ್ದರಿಂದ ತುಮಕೂರು, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳಲ್ಲಿ ಭಾಜಪ ಅಭ್ಯರ್ಥಿಗಳ ಗೆಲುವು ಸಾಧ್ಯವಾಯಿತು. ಈ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಅವಕಾಶವಿತ್ತು. ಇರಲಿ. ಮತದಾರನ ತೀರ್ಪು ಅಂತಿಮ.
ಮೈಸೂರಿನ ಕಾಂಗ್ರೆಸ್ ಕ್ಯಾಂಡಿಡೇಟ್ ಅಗ್ರೆಸೀವ್ ಆಗಿರಲಿಲ್ಲ ಎಂದು ಅಲ್ಲಿನ ಕಾಂಗ್ರೆಸ್ ಮಂದಿಯೇ ಗೊಣಗಿಕೊಳ್ಳುತ್ತಿದ್ದರು. ಚಿತ್ರದುರ್ಗದಲ್ಲಿ ಕಾಂಗ್ರೆಸ್ ಸೋತದ್ದು ಆಶ್ಚರ್ಯ.
ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿ ಭಾಜಪ ಹಿನ್ನಡೆಗೆ ಅಲ್ಲಿನ ರೈತರೇ ಕಾರಣ. ಸಂಯುಕ್ತ ಕಿಸಾನ್ ಮೋರ್ಚಾ ಕರೆಯನ್ನು ಇಡೀ ದೇಶ ಅಲ್ಲದಿದ್ದರೂ ಇನ್ನು ಐದಾರು ರಾಜ್ಯದ ರೈತರು ಗೌರವಿಸಿದ್ದರೂ ಎನ್ ಡಿ ಎ ಒಕ್ಕೂಟಕ್ಕೆ ಸೋಲುಂಟಾಗುತ್ತಿತ್ತು.
ಕರ್ನಾಟಕದಲ್ಲೇ ನೋಡಿದರೆ ಕಳೆದ ಚುನಾವಣೆಯಲ್ಲಿ ಕೇವಲ ಒಂದು ಸೀಟ್ ಗೆದ್ದ ಕಾಂಗ್ರೆಸ್ ಈ ಬಾರಿ ಒಂಬತ್ತಕ್ಕೆ ಏರಿದೆ. India has a long history of fighting back… and It has started now…
Photo by Kandavara Venkatesh