ಆರೋಗ್ಯ ಸೇವೆಗಳಿಗೆ ಹೆಚ್ಚಿನ ಅನುದಾನ ಕೋರಿದ ಪ್ರಭಾ ಮಲ್ಲಿಕಾರ್ಜುನ್
Spread the love

ನಾಗೇಶ್ ಕೆ.ಎನ್.

ದಾವಣಗೆರೆ ಎಂ.ಪಿ ಪ್ರಭಾ ಮಲ್ಲಿಕಾರ್ಜುನ್ ಲೋಕಸಭೆಯಲ್ಲಿ ಮಾಡಿದ ತಮ್ಮ ಚೊಚ್ಚಲ ಭಾಷಣದಲ್ಲಿ ದೇಶದ ಆರೋಗ್ಯ ಸೇವಾ ಕ್ಷೇತ್ರಕ್ಕೆ; ವಿಶೇಷವಾಗಿ ಮಹಿಳೆಯರು, ಮಕ್ಕಳು ಹಾಗೂ ಪ್ರಾಥಮಿಕ ಆರೋಗ್ಯ ಸೇವೆಗಳ ಅಗತ್ಯತೆಯ ಕುರಿತು ಅತ್ಯಂತ ಗಂಭೀರವಾದ ವಿಷಯಗಳನ್ನು ಪ್ರಸ್ತಾಪಿಸಿದರು. ಭಾಷಣವು ಅತ್ಯಂತ ಮಾರ್ಮಿಕವಾಗಿಯೂ ಅರ್ಥಪೂರ್ಣವಾಗಿಯೂ ಇದ್ದುದಲ್ಲದೆ ಆಳುವ ಸರ್ಕಾರವನ್ನು ಎಚ್ಚರಿಸಲು ಅತ್ಯಂತ ಸಮರ್ಥವಾಗಿತ್ತು. ಅವರ ಭಾಷಣದ ಆಯ್ದ ಭಾಗ ಇಲ್ಲಿದೆ.

ನಮ್ಮ ದಾವಣಗೆರೆ ಲೋಕಸಭಾ ಕ್ಷೇತ್ರದ ಎಲ್ಲಾ ಮತಬಾಂಧವರಗೆ ನನ್ನ ಆತ್ಮೀಯ ಕೃತಜ್ಞತೆಗಳು. ನನ್ನ ಚೊಚ್ಚಲ ಭಾಷಣವನ್ನು ನನ್ನ ಹೃದಯ ಹಾಗೂ ವೃತ್ತಿಗೆ ಬಹಳ ಹತ್ತಿರವಾದ ವಿಷಯವಾದ ಆರೋಗ್ಯ ಸೇವೆಗಳ ಬಗ್ಗೆ ಮಾಡುವ ಈ ಅವಕಾಶಕ್ಕಾಗಿ ಹೆಮ್ಮೆಪಡುತ್ತೇನೆ. ಗೌರವಾನ್ವಿತ ಸ್ಪೀಕರ್ ಸರ್ ನನಗೆ ನೀಡಿರುವ ಸಮಯಾವಕಾಶದಲ್ಲಿ ನಾನು ಐದು ಅಂಶಗಳ ಬಗ್ಗೆ ಮಾತನಾಡುತ್ತೇನೆ.

ಹೆಲ್ತ್ ಕೇರ್ ಬಜೆಟ್ ನಮ್ಮ ಜಿಡಿಪಿಯ ೨.೧% ಮಾತ್ರ ಇದೆ. ಅಮೆರಿಕಾ ತನ್ನ ಒಟ್ಟು ಜಿಡಿಪಿಯ ೧೭.೯ % ಖರ್ಚು ಮಾಡುತ್ತಿರುವುದರೊಂದಿಗೆ ನಮ್ಮನ್ನು ನಾವು ಹೋಲಿಸಿಕೊಳ್ಳುವುದನ್ನು ಮರೆತುಬಿಡೋಣ. ಬ್ಲಿಟ್ಜ಼್ ದೇಶಗಳಿಗೆ ಹೋಲಿಸಿಕೊಂಡರೂ ನಾವೇ ಅತ್ಯಂತ ಕಡಿಮೆ ವೆಚ್ಚ ಮಾಡುತ್ತಿದ್ದೇವೆ; ಬ್ರೆಜ಼ಿಲ್ ಶೇಕಡಾ ೧೦ ರಷ್ಟು ಖರ್ಚು ಮಾಡಿದರೆ ದಕ್ಷಿಣ ಆಫ್ರಿಕಾ ೮.೫ %, ರಷ್ಯಾ ೭.೫% ಮತ್ತು ಪಕ್ಕದ ಚೈನಾ ೬.೬%. ಇದಿರಲಿ ನಾವು ಸರ್ಕಾರದ ಗುರಿಯಾದ ಶೇಕಡಾ ೨.೫ ರಷ್ಟು ಮುಟ್ಟುವುದರಲ್ಲಿ ವಿಫಲರಾಗಿದ್ದೇವೆ. ಹೀಗೆ ನಾವು “ವಿಶ್ವ ಗುರು” ಆಗಬಹುದೇ ?

ನಾವು ಆರೋಗ್ಯ ಸೇವೆಗಳ ಗುರಿಯನ್ನು ತಲುಪಲಾಗಿಲ್ಲ. ೨೦೨೨ ರ ವೇಳೆಗೆ ಶಿಶು ಮರಣ ಪ್ರಮಾಣ (ಇನ್ಫ್ಯಾಂಟ್ ಮಾರ್ಟಾಲಿಟಿ ರೇಟ್) ೨೮ ಇತ್ತು ಆದರೆ ತಲುಪಬೇಕಾದ ಗುರಿ ೨೫ ಇತ್ತು.  ಇಲ್ಲಿ ನಾವು ಸೋತಿದ್ದೇವೆ. ಮಹಿಳೆಯರಲ್ಲಿ ಅನೀಮಿಯಾ ಹೆಚ್ಚಾಗಿದೆ, ಇದನ್ನು ಗಂಭೀರವಾಗಿ ಪರಿಗಣಿಸಿ ಉತ್ತಮ ಹಾಗೂ ಸಮಗ್ರ ಆರೋಗ್ಯ ಸೇವೆಗಳನ್ನು ಒದಗಿಸಬೇಕಿದೆ.

**

ಗೌರವಾನ್ವಿತ ಸ್ಪೀಕರ್ ಸರ್ ಆರೋಗ್ಯ ಸೇವೆಗಳಿಗೆ ಅಗತ್ಯವಾದ ಪ್ರಾಮುಖ್ಯತೆಯನ್ನು ಈ ಬಜೆಟ್ ನಲ್ಲಿ   ನೀಡಿಲ್ಲವೆಂಬುದನ್ನು ನಾನು ಯಾವುದೇ ಮುಲಾಜಿಲ್ಲದೆ, ಸ್ಪಷ್ಟವಾಗಿ ಹಾಗೂ ಪ್ರಾಮಾಣಿಕವಾಗಿ ಹೇಳುತ್ತೇನೆ. ನಾವು ಯಾವಾಗ ವಿಶ್ವದರ್ಜೆಯ ಸರ್ಕಾರಿ ಆಸ್ಪತ್ರೆಗಳನ್ನು ನಿರ್ಮಿಸುವುದು. ? ಹೆಚ್.ಪಿ.ವಿ ವ್ಯಾಕ್ಸಿನ್-ಪ್ರಿವೆಂಟಿವ್  ಮೆಜ಼ರ್ ;  ಮಹಿಳೆಯರಲ್ಲಿ ಅತಿ ಹೆಚ್ಚು ಕಾಣಿಸಿಕೊಳ್ಳುವ ಮೂರನೆಯದ್ದು ಸರ್ವೈಕಲ್ ಕ್ಯಾನ್ಸರ್. ಆ ಬಗ್ಗೆ ಪತ್ರಿಕೆಗಳಲ್ಲಿ ಸುದ್ದಿಯಾಗಿತ್ತು. ಸುಧಾಮೂರ್ತಿ ಅವರು ರಾಜ್ಯಸಭಾದಲ್ಲಿ ಆ ಬಗ್ಗೆ ಮಾತನಾಡಿರುವುದನ್ನು ಸ್ಮರಿಸುತ್ತಾ ಇದಕ್ಕೆ ಸಮಗ್ರ ಯೋಜನೆ ಯಾವಾಗ ಮಾಡುತ್ತೇವೆ ಎಂದು ಕೇಳಲು ಇಚ್ಛಿಸುತ್ತೇನೆ. ಕೇರಳ, ಸಿಕ್ಕಿಂ, ಡೆಲ್ಲಿ, ಪಂಜಾಬ್, ತಮಿಳುನಾಡು, ಹಿಮಾಚಲ ಪ್ರದೇಶದಲ್ಲಿ ೨೦೧೬ ರಿಂದ ಉಚಿತವಾಗಿ  ಹೆಚ್ ಪಿ ವಿ ವ್ಯಾಕಿನ್ ನೀಡುತ್ತಿವೆ. ಇದಕ್ಕೆ ತುರ್ತು ಕಾಳಜಿ ನೀಡಬೇಕಿದೆ.

ಹೀಲ್ ಇನ್ ಇಂಡಿಯಾ ಹೀಲ್ ಬೈ ಇಂಡಿಯಾ; ಆದರೆ ಭಾರತೀಯರನ್ನು ಹೀಲ್ ಮಾಡುವುದು ಯಾರು ? ಮೆಡಿಕಲ್ ಟೂರಿಸಂ ಹೆಚ್ಚಿಸಿ ಆರ್ಥಿಕತೆಯನ್ನು ಭಲಪಡಿಸುವುದನ್ನು ಒಪ್ಪುತ್ತಲೇ ಭಾರತೀಯರು ತಮ್ಮ ದುಡಿಮೆಯ ಶೇಕಾಡಾ ೬೩ ರಷ್ಟು ಆರೋಗ್ಯ ಸೇವೆಗಳಿಗಾಗಿ ಖರ್ಚು ಮಾಡುತ್ತಿರುವಾಗ ಭಾರತೀಯರನ್ನು ಗುಣಪಡಿಸುವುದು ಯಾರು?

ಕೋವಿಡ್ ಸಾಂಕ್ರಾಮಿಕದಿಂದ ನಾವು ಕಲಿತದ್ದೇನೆ? ಅಂಥ ಸನ್ನಿವೇಶಗಳ ಎದುರಾದಾಗ ತಯಾರಿ ಇರಬೇಕಲ್ಲವೇ. ಆದರೆ ಈ ಬಜೆಟ್ ನಮ್ಮನ್ನು ಅಲ್ಲಿಗೆ ಕೊಂಡೊಯ್ಯುತ್ತಿಲ್ಲ. ನಮ್ಮ ಹೆಲ್ತ್ ಕೇರ್ ಲೀಡರ್ ಶಿಪ್ ನಲ್ಲಿ ವಿಶ್ವಗುರು ಕಾಣುತ್ತಿಲ್ಲ.  ಪ್ರಾಥಮಿಕ ಆರೋಗ್ಯ ಸೇವೆಗಳ ಮೂಲಸೌಕರ್ಯಗಳಿಗೆ ಹೆಚ್ಚಿನ ಹಣ ಹೂಡಿಕೆ ಆಗಬೇಕು.

 

 


Spread the love