ವೃತ್ತಿಪರ ಕೌಶಲ್ಯಗಳ ಜಾಗತಿಕ ಸ್ಪರ್ಧೆಗೆ ರಾಜ್ಯದ 9 ವಿದ್ಯಾರ್ಥಿಗಳು: ಡಾ. ಶರಣ ಪ್ರಕಾಶ್ ಪಾಟೀಲ್

ವೃತ್ತಿಪರ ಕೌಶಲ್ಯಗಳ ಜಾಗತಿಕ ಸ್ಪರ್ಧೆಗೆ ರಾಜ್ಯದ 9 ವಿದ್ಯಾರ್ಥಿಗಳು: ಡಾ. ಶರಣ ಪ್ರಕಾಶ್ ಪಾಟೀಲ್
Spread the love

ನಾಗೇಶ್ ಕೆ.ಎನ್.

ಫ್ರಾನ್ಸ್ ನ ಲಿಯೋನ್ ನಲ್ಲಿ ನಡೆಯಲಿರುವ 47 ನೇ ವಿಶ್ವ ಕೌಶಲ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ವೃತ್ತಿಪರ ಕೌಶಲಗಳನ್ನು ಜಾಗತಿಕ ವೇದಿಕೆಯಲ್ಲಿ ಪ್ರದರ್ಶಿಸಲು ಕರ್ನಾಟಕ ಕೌಶಲ್ಯ ಅಭಿವೃದ್ಧಿ ಮಂಡಳಿ (ಕೆ.ಎಸ್.ಡಿ.ಸಿ)  ರಾಜ್ಯದ  ಒಂಬತ್ತು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದೆ. ಈ ವಿದ್ಯಾರ್ಥಿಗಳು ಫ್ರಾನ್ಸ್ ತೆರಳುವ ಮುನ್ನ ವೈಧ್ಯಕೀಯ ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಅವರನ್ನೂ ಭೇಟಿ ಮಾಡಿದರು.

2024 ಸೆಪ್ಟೆಂಬರ್ 10 ರಿಂದ 15 ರ ಅವಧಿಯಲ್ಲಿ ಫ್ರಾನ್ಸ್ ನ ಲಿಯೋನ್ ನಲ್ಲಿ ನಡೆಯುವ ವಿಶ್ವ ಕೌಶಲ್ಯ ಸ್ಪರ್ಧೆ ಯನ್ನು ವೃತ್ತಿಪರ ಕೌಶಲಗಳ ಸ್ಪ್ರರ್ಧೆಯ “ಒಲಂಪಿಕ್ಸ್” ಎಂದು ಬಣ್ಣಿಸಲಾಗಿದೆ. ವೃತ್ತಿಪರ ಶಿಕ್ಷಣ ಹಾಗೂ ಕೌಶಲ್ಯದ ಶ್ರೇಷ್ಟತೆಯನ್ನು ಪ್ರದರ್ಶಿಸಲು 22 ವರ್ಷದ ಒಳಗಿನ ಸುಮಾರು 1000 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. 61 ವಿಭಿನ್ನ ಕೌಶಲ್ಯಗಳ ಸ್ಪರ್ಧೆಗಳು ನಡೆಯುವ ಇದು ವಿಶ್ವದ ಅತಿ ದೊಡ್ದ ಕಾರ್ಯಕ್ರಮವಾಗಿದೆ. ಕರ್ನಾಟಕ ಕೌಶಲ್ಯ ಅಭಿವೃದ್ಧಿ ಮಂಡಳಿಯು  ಕರ್ನಾಟಕ ಸರ್ಕಾರದ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಆಶ್ರಯದಲ್ಲಿ ಕರ್ನಾಟಕದ ಕೌಶಲಪೂರ್ಣ ಅಭ್ಯರ್ಥಿಗಳಿಗೆ ತಮ್ಮ ಕೌಶಲಗಳನ್ನು ರಾಷ್ಟ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶಿಸಿ ಬಹುಮಾನಗಳನ್ನು ಗೆಲ್ಲುವ ಅವಕಾಶಗಳನ್ನು ಕಲ್ಪಿಸಿದೆ.

ವಿದ್ಯಾರ್ಥಿಗಳ ತಂಡಕ್ಕೆ ಶುಭಾಶಯಗಳನ್ನು ಕೋರಿದ ಸಚಿವ ಡಾ. ಶರಣ ಪ್ರಕಾಶ್ ಪಾಟೀಲರು ಈ ಅವಕಾಶವನ್ನು ಬಳಸಿಕೊಂಡು ನಿಮ್ಮ ಕೌಶಲ್ಯಗಳನ್ನು  ಅತ್ಯುತ್ತಮವಾಗಿ ಪ್ರದರ್ಶಿಸಿ ಪ್ರಶಸ್ತಿಗಳನ್ನು ಪಡೆದು ರಾಜ್ಯ ಹಾಗೂ ದೇಶಕ್ಕೆ ಹೆಸರು ತನ್ನಿ ಎಂದು  ಹುರುದುಂಬಿಸಿದರು. ವಿಶ್ವ ಕೌಶಲ್ಯ ಲಿಯೋನ್-2024 ರಲ್ಲಿ ಎಲ್ಲರಿಗೂ ಯಶಸ್ಸು ಸಿಗಲಿ ಎಂದು ಹಾರೈಸಿದರು. ಈ ಒಂಬತ್ತೂ ಮಂದಿ ವಿದ್ಯಾರ್ಥಿಗಳು ರಾಜ್ಯದ ವಿವಿಧ ಭಾಗಗಳಲ್ಲಿ ಐಟಿಐ, ಡಿಪ್ಲೊಮೋ ಹಾಗೂ ಇಂಜಿನಿಯರಿಂಗ್ ಕೋರ್ಸ್ ಗಳನ್ನು ಮಾಡುತ್ತಿದ್ದಾರೆ.

ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಮಂಡಳಿ (ಎನ್.ಎಸ್.ಡಿ.ಸಿ) ಯು ಭಾರತ ಕೌಶಲ್ಯ ಸ್ಪರ್ಧೆಯನ್ನು ಆಯೋಜಿಸಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ  ತರಭೇತಿ ನೀಡಿ ವಿಶ್ವ ಕೌಶಲ್ಯ ಸ್ಪರ್ಧೆಗೆ ತಯಾರಿ ಮಾಡುವ ಸ್ಪರ್ಧೆ ಆಯೋಜಿಸುತ್ತಾ ಬಂದಿದೆ. ನವದೆಹಲಿಯಲ್ಲಿ 2024  ಮೇ 15 ರಿಂದ 19 ರ ವರೆಗೆ ಆಯೋಜಿಸಿದ್ದ ರಾಷ್ಟಮಟ್ಟದ ಕೌಶಲ್ಯ ಸ್ಪರ್ಧೆಯಲ್ಲಿ ಕರ್ನಾಟಕ ಎರಡನೆಯ ಸ್ಥಾನ ಪಡೆದಿದೆ.

***


Spread the love