ಚಳವಳಿ ಜನಪದ- ಸಾಹಿತ್ಯ- ಸಂಸ್ಕೃತಿ

ಸಂಯುಕ್ತ ಕಿಸಾನ್ ಮೋರ್ಚಾ ಸಂಘಟಿಸಿದ್ದ ಐತಿಹಾಸಿಕ ದಿಲ್ಲಿ ಚಳುವಳಿಯ ಸಂದರ್ಭದಲ್ಲಿ ಕವಿ ವಿಲ್ಸನ್ ಕಟೀಲ್ ತಾನೇ ಖುದ್ದು ಬೆಂದು ‘ಅನ್ನ’ವಾಗಿ ಬರೆದ ಸಾಲುಗಳು….

ಅನ್ನದ ಪ್ರತಿರೋಧ -1- ರೈತರ ಚರ್ಮ ಕಿತ್ತು ಬರುವಂತೆ ಹೊಡೆದು ಸುಸ್ತಾದ ಪೋಲೀಸನೊಬ್ಬ ಬಸಬಸನೆ ವಾಂತಿ ಮಾಡಿಕೊಂಡ. ಜೀರ್ಣವಾಗದೇ ರಸ್ತೆಗೆ ಬಿದ್ದ ಅನ್ನ ಹೇಳಿತು – “ನಿನ್ನ ಹೊಟ್ಟೆಯಲ್ಲಿ ಆಹಾರವಾಗುವುದಕ್ಕಿಂತ ನನ್ನನ್ನು ಬೆಳೆದಾತನ ಪಾದದಡಿ ಗೊಬ್ಬರವಾಗುವುದು ಮೇಲು !” -2- ಆತ ಆಜ್ಞಾಪಿಸಿದ “ಇನ್ನು ಒಂದು ಶಬ್ದ ಹೆಚ್ಚು ಮಾತಾಡಿದರೆ,…