ಕೃಷಿ ಸಮಯ ಡೆಸ್ಕ್
ಬೂಕರ್ ಪ್ರಶಸ್ತಿ ಪ್ರಕಟವಾಗುವ ಮುನ್ನ ಬಾನು ಮುಷ್ತಾಕ್ ಅವರ ಕತೆಗಳನ್ನು (ಕೆಲವು) ಒದಿದ್ದೆನಾದರೂ, ಭಾಷಾಂತರದ ಕೂಲಿಕಾರನಾದ ನನಗೆ ದೀಪಾ ಬಸ್ತಿ ಅವರ ಅನುವಾದ ನೋಡುವ ಕುತೂಹಲವಿತ್ತು.
ಹಾಗಾಗಿ ಪ್ರಶಸ್ತಿ ಬಂದ ದಿನವೇ ಆಕೃತಿ ಗುರು ಅವರಿಗೆ ಫೋನ್ ಮಾಡಿ ಹಾರ್ಟ್ ಲ್ಯಾಂಪ್ ಪುಸ್ತಕ ತರಿಸಿಕೊಂಡೆ. ಟೈಟಲ್ ಕತೆಯನ್ನು ಅಂದೇ ಓದಿದೆ. ಭಾಷಾಂತರ ಸೊಗಸಾಗಿದೆ. ದೀಪಾ ಅವರಿಗೆ ಅಭಿನಂದನೆಗಳು.
ಇದೀಗ ಬಾನು ಮುಷ್ತಾಕ್ ಅವರಿಗೆ ಸ್ಜರ್ಕಾರ ಜಿ ಕ್ಯಾಟಗರಿ ಸೈಟ್ ನೀಡಿರುವ ಹಿನ್ನೆಲೆಯಲ್ಲಿ ದೀಪಾ ಅವರಿಗೂ ಸೈಟ್ ಕೊಡಬೇಕೆಂಬ ಸೊಲ್ಲೆದ್ದಿದೆ. ಮೊದಲು ಈ ಸೊಲ್ಲಿಗೆ ನನ್ನ ಮತಹಾಕುತ್ತೇನೆ. ದೀಪಾ ಅವರಿಗೂ ಈ ಸರ್ಕಾರ ಸೈಟ್ ಕೊಡಬೇಕು. ಅದು ನ್ಯಾಯ. (ಬೂಕರ್ ಪ್ರಶಸ್ತಿಯ ಮೊತ್ತದ ಅರ್ಧ ಭಾಗ ಅನುವಾದಕರಾದ ದೀಪಾ ಅವರಿಗೆ ಕೊಟ್ಟಿರುವ ಸಂಗತಿ ಸರ್ಕಾರಕ್ಕೆ ತಿಳಿದಿದೆ ತಾನೆ ? )
ಇಂಡಿಯನ್ ಎಕ್ಸ್ ಪ್ರಸ್, ಟೈಮ್ಸ್ ಆಫ್ ಇಂಡಿಯಾ ಹೀಗೆ ಹಲವು ಪ್ರತಿಷ್ಟಿತ ಆಂಗ್ಲ ಪತ್ರಿಕೆಗಳಲ್ಲಿ ಕೆಲಸ ಮಾಡುತ್ತಾ ಗಗನದೆತ್ತರದ ಕನಸುಗಳನ್ನು ಕಟ್ಟಿಕೊಳ್ಳುತ್ತಾ ಅದಕ್ಕೆ ತಕ್ಕುದಾದ ಗೆಳೆಯರೊಟ್ಟಿಗೆ ಬದುಕು ಕಟ್ಟಿಕೊಂಡ ದೀಪಾ ಅವರೂ ಕೂಡಾ ಬಾನು ಮುಷ್ತಾಕ್ ಅವರಂತೆ ಕನ್ನಡದ ಹೆಮ್ಮೆ.
ಪ್ರಾಯಶಃ ನಮ್ಮ ನಡುವೆಯೇ ನಮ್ಮ ಸಹೋದ್ಯೋಗಿಗಳೊಟ್ಟಿಗೆ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಕುಳಿತು ಘನವಾದ ಚಿಂತನೆಗಳನ್ನು ಹರಟಿ ಹೋಗುತ್ತಿದ್ದ ದಿನಗಳು ನನ್ನ ನೆನಪಿನಲ್ಲಿ ಮುಸುಕು ಮುಸುಕಾಗಿ ಕಾಣತೊಡಗಿವೆ.
ಆ ಬಗ್ಗೆ ಅಂತಾರಾಷ್ಟ್ರೀಯ ಖ್ಯಾತಿಯ ಗೆಳೆಯರು ದೀಪಾ ಅವರ ಜರ್ನಿಯ ಬಗ್ಗೆ ಹೆಚ್ಚು ಬೆಳಕು ಚೆಲ್ಲಬಲ್ಲರು ಅಂದುಕೊಂಡಿದ್ದೇನೆ…
ANYWAYS I DEMAND G CATEGORY SITE TO MS DEEPA BASTHI
