ಕೃಷಿ ಸಮಯ ಡೆಸ್ಕ್
ಕರ್ನಾಟಕ ರಾಜ್ಯ ಕೃಷಿ ಇಲಾಖೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ನೌಕರರ ಕ್ಷೇಮಾಭಿವೃದ್ಧಿ ಸಂಘ ಮತ್ತು ಕೃಷಿ ಪದವೀಧರ ಅಧಿಕಾರಿಗಳ ಸಂಘದ ಸಹಯೋಗದಲ್ಲಿ ಇಂದು ಬೆಂಗಳೂರಿನ ಕೃಷಿ ಆಯುಕ್ತರ ಕಛೇರಿ ಸಂಗಮ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಭಗವಾನ್ ಬುದ್ಧ, ಸಮಾನತೆಯ ಹರಿಕಾರ ಬಸವಣ್ಣ, ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನರಾಮ್ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರ ಜನ್ಮ ಸ್ಮರಣಾ ಕಾರ್ಯಕ್ರಮವನ್ನು ಕೃಷಿ ಸಚಿವ ಎನ್. ಚಲುವರಾಯಸ್ವಾಮಿಯವರು ಉದ್ಘಾಟಿಸಿದರು ..
ಭಗವಾನ್ ಬುದ್ಧರ ಕರುಣೆ, ಅಹಿಂಸೆ ಮತ್ತು ಜ್ಞಾನದ ಮಾರ್ಗವನ್ನು, ಬಸವಣ್ಣನವರ ಸಾಮಾಜಿಕ ಸಮಾನತೆ ಮತ್ತು ಕಾಯಕವೇ ಕೈಲಾಸ ಎಂಬ ತತ್ವವನ್ನು, ಬಾಬು ಜಗಜೀವನರಾಮ್ ಅವರ ಕೃಷಿ ಕ್ಷೇತ್ರದಲ್ಲಿ ಹಸಿರು ಕ್ರಾಂತಿಯ ಕನಸನ್ನು, ಮತ್ತು ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯ ಹಾಗೂ ಸಂವಿಧಾನದ ಮೂಲಕ ದೇಶಕ್ಕೆ ನೀಡಿದ ಅಮೂಲ್ಯ ಕಾಣಿಕೆಯನ್ನು ಸ್ಮರಿಸುವ ಜೊತೆ ಅವನ್ನು ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಿಸುವುದು ನಮ್ಮ ಆದ್ಯತೆಯಾಗಿದೆ ಎಂದು ಸಚಿವರು ತಿಳಿಸಿದರು..
ಕೃಷಿ ಇಲಾಖೆ ಆಯುಕ್ತರಾದ ಶ್ರೀ ವೈ.ಎಸ್.ಪಾಟೀಲ್, ಕೃಷಿ ಇಲಾಖೆ ನಿರ್ದೇಶಕರಾದ ಡಾ.ಜಿ.ಟಿ.ಪುತ್ರ ಸಹಿತ ಇತರ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
